NAANAADADA MAATHELLAVA LYRICS IN KANNADA | GAALIPATA 2 | SONU NIGAM | ARJUN JANYA |YOGARAJ BHAT |

Advertisement

Gaalipata 2 | Naanaadadaa | Lyrical | Ganesh | Vaibhavi | Yogaraj Bhat | Jayant Kaikini |Arjun Janya – Sonu Nigam Lyrics

Advertisement
Singer Sonu Nigam
Music Arjun Janya
Song Writer Jayant Kaikini

Naanaadada Maathellava song lyrics Gaalipata 2 movie song (Kannada Lyrics)

ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು

ಓದದಾ ಪುಸ್ತಕ ನಾನು
ಎದೆಗೊತ್ತಿಕೊಳ್ಳುವೆಯೇನು
ಬಿಸಿಯ ಉಸಿರು ನೀಡಿ
ಪ್ರತಿ ಸಾಲನೂ
ಕಥೆಯಾಗಿಸು

ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು

ಮಧುರ ಕನಸಿನ ಕದಾ
ತೆರೆದೆ ಇಡುವೆನು ಸದಾ
ಒಂಟಿ ನಾನಾದರೂ
ಸಂಭಾವಿತಾ

ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ
ಸುಸ್ವಾಗತಾ

ತೆರೆಯಾ… ಮರೆಯಾ… ವಿಷಯಾ…
ತುಂಬಾ ಇದೆ
ಕೃಪಯಾ ಹಿಂಬಾಲಿಸು..

ನಿನ್ನ ಸೆಳೆತದ ಸವಿ
ಬರೆಯಲಾರನು ಕವಿ
ಮನದಿ ಬರಿ ನಿನ್ನದೇ
ಚಿತ್ರೋತ್ಸವ

ಪಂಚನಾಮೆಯ ಬಿಡು
ಪ್ರಥಮ ಚಿಕಿತ್ಸೆಯ ಕೊಡು

ಮಾಡಿ ಸದ್ದಿಲ್ಲದಾ ಅಪಘಾತವಾ
ಉಭಯಾ ಹೃದಯಾ
ಅದಲೂ ಬದಲಾದರೆ
ನೀನೇ ಸಂಭಾಳಿಸು

ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು



Advertisement

Leave a Reply