Besuge Yaava huvu yaara mudigo Lyrics – S P Balasubramaniam Lyrics

Singer | S P Balasubramaniam |
Music | Vijaya Bhaskar |
Song Writer | Shyamsundar Kulkarni |
Yaava Huvu Yarra mudigo Song Lyrics
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ…
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ…
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ…
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ