Tale huva edeyinda – Khaidi Movie Song Lyrics – Vishnuvadhan – S P Balasubramaniam & P Susheela Lyrics

Singer | S P Balasubramaniam & P Susheela |
Music | K. Chakravarthy |
Song Writer | Chi. Udayashankar |
Taale Huva edeyinda song Lyrics
ತಾಳೆ ಹೂವ ಎದೆಯಿಂದ
ಜಾರಿ ಜಾರಿ ಹೊರ ಬಂದ
ತಾಳೆ ಹೂವ ಎದೆಯಿಂದ
ಜಾರಿ ಜಾರಿ ಹೊರ ಬಂದ
ನಾಗಿಣಿ ನಾನಾದಾಗ
ನಿನ್ನರಸಿ ಬಂದಾಗ
ಕದ್ದೋಡುವೆಯೋ
ಮುದ್ದಾಡುವೆಯೋ
ತಾಳೆ ಹೂವ ಪೊದೆಯಿಂದ
ಜಾರಿ ಜಾರಿ ಹೊರ ಬಂದ
ತಾಳೆ ಹೂವ ಪೊದೆಯಿಂದ
ಜಾರಿ ಜಾರಿ ಹೊರ ಬಂದ
ನಾಗಿಣಿ ನೀನಾದಾಗ
ನನ್ನರಸಿ ಬಂದಾಗ
ಜೊತೆಯಾಗುವೆನೂ
ಮುದ್ದಾಡುವೆನೂ
ತಾಳೆ ಹೂವ ಎದೆಯಿಂದ
ಜಾರಿ ಜಾರಿ ಹೊರ ಬಂದ
ಮಸಕು ಮಸಕು ಸಂಜೆಯಲಿ
ಮಲ್ಲೆ ಮೊಗ್ಗ ದೀಪದಲ್ಲಿ
ಚಿಕ್ಕ ಪುಟ್ಟ ಪೊದೆಯಲ್ಲಿ
ಹಸಿರು ಹುಲ್ಲ ಮೆತ್ತೆಯಲ್ಲಿ
ವಿರಹದಲೀ ದಾಹದಲೀ
ಮೋಹದಲಿ ಆಡಿ
ಬಂದೆ ನಿನ್ನ ನೋಡಿ
ಈ ಹೆಡೆಯ ನೆರಳಲಿ
ಹಾಯಾಗಿ ಮಲಗಲು
ನಾ ಅಧರ ಸುಧೆಯನು
ಹಿತವಾಗಿ ಹೀರಲು
ಇನ್ನೂ ಬೇಕೇ, ಇನ್ನೂ ಬೇಕೇ
ಎನ್ನುವೆ ನೀನಾಗ
ಸನಿಹಕೆ ಬಂದಾಗ
ತಾಳೆ ಹೂವ ಎದೆಯಿಂದ
ಜಾರಿ ಜಾರಿ ಹೊರ ಬಂದ
ತಾಳೆ ಹೂವ ಪೊದೆಯಿಂದ
ಜಾರಿ ಜಾರಿ ಹೊರ ಬಂದ
ಪೂರ್ಣ ಚಂದ್ರ ಬಂದಾಗ
ಹಾಲಿನಂಥ ಬೇಳಕಾದಾಗ
ಬೀಸಿ ಬೀಸಿ ತಂಗಾಳಿ
ಸೂಂಯ್ ಎಂದು ಸದ್ದಾದಾಗ
ಯೌವ್ವನದಾ ಆಸೆಯಲೀ
ಜೊತೆಗಾಗಿ ಹಾಡುವೆ
ಜೊತೆ ಸೇರಿ ಆಡುವೆ
ಈ ಸುಖದ ಆಸೆಗೆ
ಈ ಮಧುರ ಭಾಷೆಗೆ
ಆನಂದವಾಗಿದೆ
ಮತ್ತೇರಿ ಹೋಗಿದೆ
ಇನ್ನೂ ಹೀಗೇ, ಇರುವ ಆಸೆ
ಹೊಮ್ಮಿದೆ ಎದೆಯಲ್ಲಿ
ಸೇರು ನನ್ನಲ್ಲಿ
ತಾಳೆ ಹೂವ ಪೊದೆಯಿಂದ
ಜಾರಿ ಜಾರಿ ಹೊರ ಬಂದ
ನಾಗಿಣಿ ನಾನಾದಾಗ
ನಿನ್ನರಸಿ ಬಂದಾಗ
ಜೊತೆಯಾಗುವೆನೂ
ಮುದ್ದಾಡುವೆನೂ
ತಾಳೆ ಹೂವ ಎದೆಯಿಂದ
ಜಾರಿ ಜಾರಿ ಹೊರ ಬಂದ