ONDU MUNJANE SONG LYRICS IN KANNADA|YAJAMANA|DARSHAN| SONU NIGAM| RASHMIKA

Advertisement
Advertisement

Yajamana | Ondu Munjane Song Lyrics in Kannada | Darshan | Rashmika | V Harikrishna | Media House Studio – Sonu Nigam & Shreya Ghoshal Lyrics

SingerSonu Nigam & Shreya Ghoshal
MusicV Harikrishna
Song WriterKaviraj

ಒಂದು ಮುಂಜಾನೆ Lyrics In Kannada

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ

ನನ್ನ ತಾರೆ ನಿನ್ನ ಮೇಲೆ
ಗೋಲಿ ಆಡ್ತಿದ್ದ ವಯಸ್ಸಲ್ಲೆ ಪ್ರೀತಿ
ಶುರುವಾಗೋಯ್ತೆ

ನೀ ಕಾಣೋ ಎಲ್ಲ ಕನಸ
ಮಾಡುವೆನೆ ನಾನು ನನಸ
ದಾಸ ನಿಂಗೆ ಖಾಸ

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ

ಯಾರಿಲ್ಲದ ಊರಲ್ಲಿ
ಒಂದು ನದಿ ದಂಡೇಲಿ
ನಾವೊಂದು ಪುಟ್ಟ ಮನೆ ಮಾಡಿ

ಬೆಳದಿಂಗಳ ರಾತ್ರೇಲಿ
ನಕ್ಷತ್ರದ ಹೊದಿಕೇಲಿ
ನಾನಿರುವೆ ನಿನ್ನ ಮಡಿಲಲ್ಲಿ

ನಿನಗೆ ನಾನು ನನಗೆ ನೀನು
ನನ್ನ ಜಗದ ದೊರೆಯು ನೀನು
ರಾಣಿ… ಬಾ…

ನೀನಿರದೆ ಒಂದು ನಿಮಿಷ
ಇರಲಾರ ನಿನ್ನ ಅರಸ
ದಾಸ ನಿಂಗೆ ಖಾಸ…

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ…

ಸಿಹಿಮುತ್ತಿನ ಕಂದಾಯ
ಪ್ರತಿನಿತ್ಯವು ಸಂದಾಯ
ಮಾಡೊದು ಮರಿಬೇಡ ಇಂದು

ಒಂದೆ ಕಣೆ ಒತ್ತಾಯ
ನಿಂಗೆ ಹಣೆ ಬಿಂದಿಯ
ದಿನ ನಿತ್ಯ ಇಡೊ ಕೆಲಸ ನಂದು
ನನದೆ ಕಣ್ಣು ತಗುಲೊ ಭಯವೆ
ಕಣ್ಣು ಮುಚ್ಚು ಅಲ್ಲೂ ಸಿಗುವೆ
ರಾಣಿ… ಬಾರೆ

ಕಾವೇರಿ ಕಾಯೊ ಕೆಲಸ
ಮಾಡುವೆನೆ ಎಲ್ಲ ದಿವಸ
ದಾಸ ನಿಂಗೆ ಖಾಸ….ಒಂದು ಮಳೆಬಿಲ್ಲು ಒಂದು ಮಳೆಮೋಡ

Advertisement

Leave a Reply