ಮಳವಳ್ಲಿ ಮಾವನ ಮಗನೆ –ODEYA-Malavalli Maavana Magane-Song Lyrics Kannada
Odeya | Malavalli Maavana Magane | Darshan | Sanah | M.D.Shridhar | N.Sandesh | Arjun Janya – Kailash Kher, Santosh Venky, Sony Komanduri Lyrics
Singer | Kailash Kher, Santosh Venky, Sony Komanduri |
Music | Arjun Janya |
Song Writer | Kaviraj |
ODEYA-Malavalli Maavana Magane- Lyrics Kannada
ಮಳವಳ್ಲಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ಬಂದ್ರು ಬಂದ್ರು ನೋಡೊ ಮ್ಯಾನ್ ಆಫ್ ಕ್ಲಾಸ್
ದಾರಿ ಬಿಡ್ರೋ ಫಾರ್ ದಿ ಮಾನ್ ಆಫ್ ಕ್ಲಾಸ್
ನಮ್ಮದೇ ಹುಡ್ಗಿ ರೇಷ್ಮೆ ಸೀರೆ ಉಟ್ಟರೆ
ಹೆಂಗಿದೆ ಅಂಥ ಸನ್ನೆ ಮಾಡಿ ಬಿಟ್ಟರೆ
ಬಡಪಾಯಿ ಈ ಜೀವ
ತಡ್ಕೊಳ್ಳೊದ್ ಹೆಂಗ್ ಹೇಳ್ರಪ್ಪೊ
ಮಳವಳ್ಲಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ತೇರಿಗಿಂತ ನೀನೆ ತುಂಬ ಚೆನ್ನಾಗ್ ಕಾಣುತೀಯ
ಗುಂಪಿನಲ್ಲಿ ಯಾಕೆ
ಹಿಂಗೆ ತಂಟೆ ಮಾಡುತೀಯ
ಸುಮ್ಮನೆ ಇದ್ದರೆ ಕಣ್ಣಿನಲ್ಲೆ ಕೊಲ್ತೀಯ
ಮಾವನ್ ಮಗನೇ
ಮಳವಳ್ಳಿ ಮಾವನ್ ಮಗನೇ
ಎಷ್ಟು ಚೆಂದ ಎಲ್ಲ ಮಾಯ
ಆಗಿಬಿಟ್ಟರೆ
ಜಾತ್ರೆಯಲ್ಲಿ ಸುತ್ತಬೇಕು ನಾವು ಇಬ್ಬರೆ
ಟೆಂಟಿನಲ್ಲಿ ಅಂಟಿ ಕೂತು ಮ್ಯಾಟ್ನಿ ಪಿಚ್ಚರು
ಹಾಯಾಗಿ ನೋಡೋನ್ ಬಾರೆ
ಮಳವಳ್ಲಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ಮುತ್ತಿನಂಥ ಅಳಿಯ ಸಿಕ್ಕ
ನಮ್ಮ ಊರಿಗೊಬ್ಬ
ಚಂದವಾಯ್ತು ನೀನು ಬಂದು
ನಮ್ಮ ಊರ ಹಬ್ಬ
ಬೀದಿಗೆಲ್ಲ ಕಟ್ಟಿ
ಜಲ್ಲಿ ಕಬ್ಬು ಬಾಳೆ ಕಂಬ
ಸ್ವಾಗತ ಕೋರುತ
ಆರತೀಯ ಎತ್ತು ಬಾ
ನಮ್ಮೂರ್ ಒಡೆಯ ನೀನಿನ್ನು
ನಮ್ಮೊರ್ ಒಡೆಯ
ನಿಮ್ಮ ಪ್ರೀತಿ ಕಂಡು ನಾನು
ಧನ್ಯನಾದೆನು
ನಾನು ಬೇರೆಯಲ್ಲ ಇನ್ನು
ನಿಮ್ಮಲೊಬ್ಬನು
ಪ್ರಾಣ ಇರುವ ತನಕ ಎಂದು
ಮರೆಯಲಾನು
ಈ ನಿಮ್ಮ ಅಭಿಮಾನವ
ಮಳವಳ್ಲಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ