NEENE MODALU NEENE KONE LYRICS IN KANNADA | KISS

Advertisement

Neene Modalu Neene Kone | Kiss | Viraat, Sreeleela | A P Arjun | Adi Hari | Shreya Ghoshal – Shreya Ghoshal Lyrics

Advertisement
SingerShreya Ghoshal
MusicV Harikrishna
Song WriterA P Arjun

Neene Modalu neene Kone Lyrics In Kannada

ನೀನೆ ಮೊದಲು, ನೀನೆ ಕೊನೆ
ಬೇರೆಯಾರು.. ಬೇಡ ನನಗೆ
ಉಸಿರು ಇರುವ ಕೊನೆಯವರೆಗೂ
ಇರಲೇ ಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸೋ, ಒಂದು ಬಾರಿ..
ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ!

ನೀನೆ ಮೊದಲು, ನೀನೆ ಕೊನೆ
ಬೇರೆಯಾರು.. ಬೇಡ ನನಗೆ!

ನೀನಿರುವುದು ನನಗೆ,
ನಾನು ಇರುವುದು ನಿನಗೆ
ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ, ಆಕಾಶದ ಕೊನೆಗೆ!
ಕಡಲು ಇರುವುದು ಅಲೆಗೆ,
ಮಳೆಯೂ ಇರುವುದು ಎಲೆಗೆ
ಎದೆಯಲ್ಲಿ ಇಂದು ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ!
ಆಮಂತ್ರಿಸು ನನ್ನ, ನಿನ ಪ್ರೀತಿ ಅರಮನೆಗೆ
ಕಾದಿರಲಿ ನನಗೊಂದು, ಅಂಬಾರಿ ಮೆರವಣಿಗೆ!
ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ..
ಎಲ್ಲಾ ನಿನ್ನಿಂದಲೇ..!
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ!
ಜೀವ ಹೋದರೂನು, ಈ ಜೀವಕೆ ಜೀವ ನೀನು
ಸಾಕಿನ್ನುವಂತೆ ಪ್ರೀತಿಸಬೇಕು, ಸಾಯುವವರೆಗೂ ನಾನು!
ಪ್ರತಿಯೊಂದು ಹೆಜ್ಜೆಯೂ ನನ್ನ,
ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ ಜೊತೆಗೆ ನಿನ್ನ ನೆರಳೆ ಬರಲಿ!
ಮನಸಾರೆ ನಿನ್ನನ್ನು, ನಾ ಒಪ್ಪಿಕೊಂಡಿರುವೆ..
ನಿನ್ನನ್ನು ನೋಡುತ್ತಾ, ನಾ ಮೌನಿ ಆಗಿರುವೆ!

ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ..
ಎಲ್ಲಾ ನಿನ್ನಿಂದಲೇ..!
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ….



ಸಮಾಧಾನ.. ಮಾಡ್ಕೋ ಮಗ-KISS

ಚಿತ್ರರಂಗದ ತಾಜಾ ಸುದ್ದಿಗಳಿಗಾಗಿ ಈ ಲಿಂಕನ್ನು ಒತ್ತಿ-https://kannadafilmnews.in/

Advertisement

Leave a Reply

Close Menu