NAGUTHA NAGUTHA BAALU LYRICS IN KANNADA | PARASHURAM | Dr.RAJKUMAR

Advertisement

Nagutha Nagutha Kannada Song | Kannada Old Songs | Kannada Songs Lyrics | Dr Rajkumar – Dr. Rajkumar Lyrics

Advertisement
SingerDr. Rajkumar
MusicHamsalekha
Song WriterChi. Udayashankar

Nagutha Nagutha Baalu Lyrics in kannada

ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು

ಹೂವು ನಕ್ಕಾಗ ತಾನೇ, ಅಂದ
ಇರುವುದು, ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ
ಬೆಳಕು ಬರುವುದು ಕಡಲು
ಕುಣಿಯುವುದು
ಸೂರ್ಯನಾಡೋ ಜಾರೋ ಆಟ ಬಾನು
ನಗಲೆಂದೇ
ಬೀಸೋ ಗಾಳಿ ತೂಗೋ ಪೈರು
ಭೂಮಿ ನಗಲೆಂದೇ
ದೇವರು ತಂದ ಸೃಷ್ಟಿಯಾ
ಅಂದ ಎಲ್ಲರೂ ನಗಲೆಂದೇ
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ

ಆಕಾಶದಾಚೆ ಎಲ್ಲೋ
ದೇವರಿಲ್ಲವೋ
ಹುಡುಕಬೇಡವೋ
ಆ ಮಾಯಗಾರ ತಾನು
ಗಿರಿಯಲಿಲ್ಲವೋ
ಗುಡಿಯಲಿಲ್ಲವೋ
ಪ್ರೀತಿಯಲ್ಲಿ
ಸ್ನೇಹದಲ್ಲಿ ಇರುವನು
ಒಂದಾಗಿ
ತಂಪಿನಲ್ಲು ಕಂಪಿನಲ್ಲು
ಬರುವನು ಹಿತವಾಗಿ
ಸಂತಸದಲ್ಲಿ
ಸಂಭ್ರಮದಲ್ಲಿ ಮಕ್ಕಳ
ನಗುವಾಗಿ

ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು



ನಗು ನಗುತಾ ನಲಿ ನಲಿ- Bangarada Manushya

ಚಿತ್ರರಂಗದ ತಾಜಾ ಸುದ್ದಿಗಳಿಗಾಗಿ ಈ ಲಿಂಕನ್ನು ಒತ್ತಿ -https://kannadafilmnews.in/

Advertisement

Leave a Reply

Close Menu