OLD KANNADA SONGS LYRICS
Maathu thappada maga – Entha soundarya nodu Song Lyrics – S. P. Balasubrahmanyam Lyrics
Singer | S. P. Balasubrahmanyam |
Music | ILAYARAJA |
Song Writer | R N Jayagopal |
ಹೆಯ್…ಹೆಯ್ ಹೆಯ್, ಹಾ..ಹಾಹಾಹಾ
ಎ ಹೆಯ್ ಹೆಯ್, ಎ ಹೆಯ್ ಹೆಯ್
ಎ ಹೆಯ್ ಹೆಯ್ ಹೆಯ್ ಹೆಯ್…
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ
ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ
ಭರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುತ ಮೆರೆಯುವೆನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದ,
ಸಾವಿರ ಭಾಷೆಯ, ಕಲಿತರು ಮನಕೇ, ಕನ್ನಡ ನುಡಿಮುತ್ತೆ ಅಂದ,
ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ, ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ, ನಾಡಿದು, ಚಿನ್ನದಾ, ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಲಾ ಲಾ ಲಾ ಲಾ ಲಾ, ಲಾ ಲಾ ಲಾ ಲಾ ಲಾ