KERE YERI MELE LYRICS IN KANNADA | SONU NIGAM | MUGULU NAGE

Advertisement

KERE YERI FULL SONG LYRICS|MUGULU NAGE| GANESH | SONU NIGAM| YOGARAJ BHAT| V HARIKRISHNA – Sonu Nigam Lyrics

Advertisement
SingerSonu Nigam
MusicV Harikrishna
Song WriterYogaraj Bhat

Kere Eri Myal bandu song Lyrics

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ
ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬಾ ಅರಳ್ಯಾವೇ ಕಿಡಿಗೇಡಿ ಕೆಂದಾವರೆ
ನಾವ್ ಕನಸಲ್ಲಿ ಹೆಂಗಪ್ಪಾ ಆರಾಮಾಗಿರಬೇಕು ಹಗಲೊತ್ತೆ ಹಿಂಗಾದರೆ
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ

ಹಿಂಗೇ ಹಿಂದೊಮ್ಮೆ ಎಂದೋ ನಡೆದಂತೆ ಸುತ್ತ ಮುತ್ತ ಮರೆತು ಕುಂತೆ
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು ಮತ್ತೆ ಮತ್ತೆ ನೆನಪಾದಂತೆ
ಮನದ ಗುಡಿಯಲ್ಲಿ ಹಚ್ಚಿಕೊಂಡಿರುವೆ ಒಂದು ಎರಡು ಮೂರು ಹಣತೆ
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ ಅನ್ನೋದನ್ನೇ ನಾನು ಮರೆತೇ
ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ ಹಣೆ ಮೇಲೆ ಮೂರನೇ ಗೆರೆ
ಈ ಬದುಕಲ್ಲಿ ಯಾವಾನೂ ಆರಾಮಾಗಿರಲಾರ ಹಳೆ ನೆನೆಪೇ ನಿಂತೊದರೆ
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ

ತುಂಬಾ ಅನಿಸುವುದು ನನ್ನಂತ ನನಗೂ ಪ್ರೀತಿ ಇನ್ನು ಗೊತ್ತಾಗಿಲ್ಲ
ಹಾಂಗಾಗಿ ನಾನು ನನ್ನ ಜೊತೆಗೇನೇ ಜಾಸ್ತಿ ಏನು ಮಾತಾಡಲ್ಲ
ಒಂದು ಸರಿಯಾದ ದುಃಖ ಇರದಿದ್ರೆ ಕಣ್ಣು ಕೂಡ ತುಂಬೋದಿಲ್ಲ
ತುಂಬಾ ಪ್ರೀತಿಸುವೆ ತುಂಟು ತನವನ್ನು ಗಾಂಭೀರ್ಯವೇ ನಂಗಾಗಲ್ಲ
ಯಾವ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ ಯಾರ್ ಮೇಲೂ ಬಟ್ಟೆ ಬರೆ
ನಾ ಅನಿಸಿದ್ದು ಹೇಳಿರುವೆ ನನ್ನ ಹುಡುಗೀರೇ ಕ್ಷಮಿಸಿ ನೀವೆಲ್ಲಾ ಸಿಟ್ಟಾದರೆ
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ
ರೂಪಸಿ ಸುಮ್ಮನೆ ಹೇಗಿರಲಿ -MUGULU NAGE

Advertisement

Leave a Reply