KANNADA OLD SONG LYRICS | SRIKANTA VISHAKANTA | ANURAGA ARALITHU | DR.RAJKUMAR | ಸಾಹಿತ್ಯ ಕನ್ನಡದಲ್ಲಿ

Advertisement

SRIKANTA VISHAKANTA LOKAVANNU ULISALU VISHAVANU KUDIDA NANJUNDESHWARANE from ANURAGA ARALITHU

Advertisement

Srikanta VishaKanta | Anuraga Aralithu | Kannada Old Songs Lyrics |Dr.Rajkumar – Dr. Rajkumar Lyrics

SingerDr. Rajkumar
MusicUpendra Kumar

ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಲೋಕವನ್ನು ಉಳಿಸಲು
ವಿಷವನ್ನು ಕುಡಿದ
ನಂಜುಂಡೇಶ್ವರನೇ …
ಲೋಕವನ್ನು ಉಳಿಸಲು
ವಿಷವನ್ನು ಕುಡಿದ
ನಂಜುಂಡೇಶ್ವರನೇ …
ಗತಿ ನೀನೆಂದರೆ ಓಡುತ್ತಾ
ಬರುವ ಕರುಣಾ ಸಾಗರನೇ .
ಗತಿ ನೀನೆಂದರೆ ಓಡುತ್ತಾ
ಬರುವ ಕರುಣಾ ಸಾಗರನೇ .
ಶ್ರೀಕಂಠ ವಿಷಕಂಠ
ಶ್ರೀಕಂಠ .ವಿಷಕಂಠ …

ಹರಿಯುವ ನದಿಯಲ್ಲಿ ಕಲರವ
ನಾದ ಕೂಡ ಶಿವ ಶಿವ
ಎನ್ನುತ್ತಿದೆ…
ಅರಳಿದ ಸುಮದಲ್ಲಿ ನಲಿಯುವ
ಭ್ರಮರವು ಶಿವನಾಮ
ಹಾಡುತ್ತಿದೆ …
ಬೀಸುವ ಗಾಳಿಯು ಪರಿಮಳ
ಚೆಲ್ಲುತ್ತಾ ನಿನ್ನನೇ
ಸ್ಮರಿಸುತ್ತಿದೆ .
ಬೀಸುವ ಗಾಳಿಯು ಪರಿಮಳ
ಚೆಲ್ಲುತ್ತಾ ನಿನ್ನನೇ
ಸ್ಮರಿಸುತ್ತಿದೆ …
ಶ್ರೀಕಂಠ ವಿಷಕಂಠ
ಶ್ರೀಕಂಠ .ವಿಷ ಕಂಠ

ಆಹಾ… ಆಹಾ… ಆಹಾ…

ಸಾವಿರ ಜನುಮವೇ ಬಂದರೂ
ಹೀಗೆ ನಿನ್ನ
ಸನ್ನಿಧಿಯಲ್ಲಿ ಇರಿಸು …
ಉಸಿರಿನ ಉಸಿರಲ್ಲು ತಂದೆ
ಎಂದು ನಿನ್ನ ನಾಮವನ್ನು
ಬೆರೆಸು…
ಕತ್ತಲಲ್ಲಿ ಇರುವೆ
ನೆಮ್ಮದಿ ತುಂಬಿ
ಕೈಹಿಡಿದು ನಡೆಸು
ಕತ್ತಲಲ್ಲಿ ಇರುವೆ
ನೆಮ್ಮದಿ ತುಂಬಿ
ಕೈಹಿಡಿದು ನೆಡೆಸು…

ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ .
ಲೋಕವನ್ನು ಉಳಿಸಲು
ವಿಷವನ್ನು ಕುಡಿದ
ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ್ತಾ
ಬರುವ ಕರುಣಾ ಸಾಗರನೇ

ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ



ಮಾಣಿಕ್ಯ ವೀಣಾ ಮುಪಲಾಲಯಂತೀಮ್...

Advertisement

Leave a Reply

Close Menu