GANDARA GANDA LYRICS IN KANNADA | AMBAREESHA | DARSHAN

Advertisement

Ambareesha – Gandara Ganda Full Song Lyrics | Darshan Thoogudeep, Dr Ambarish – S P Balasubrahmanyam Lyrics

Advertisement
SingerS P Balasubrahmanyam
MusicV Harikrishna
Song WriterDr.V. Nagendra Prasad

Gandara Ganda Song lyrics

((ಗಂಡರ ಗಂಡ ಗಂಡ ಭೇರುಂಡ ಭೈರವ
ರಾಜ ಮಾರ್ತಾಂಡ ಧರ್ಮ ಕೋದಂಡ ಭೈರವ))

ಕೋಡುಗಲ್ಲ ನೆತ್ತಿಮೇಲೆ ಬಿಚ್ಚುಗತ್ತಿ ಯೋಧ ನಿಂತ
ಏಳು ಸುತ್ತು ಕೋಟೆ ಮೇಲೆ ಸಿಂಹದಂತೆ ಕಾದು ಕುಂತ,
ವಿಷ್ಣು ಶೈವ ಪಂಥವೆಲ್ಲ ಒಂದೇ ಎಂದ
ದಾನ-ಧರ್ಮ ಒಂದೇ ನನ್ನ ಜೀವವೆಂದ,
ಕುಲ ಮತಗಳನು ಸಮ ಎಂದವನು
ನೆಲ ಜಲಗಳನು ಉಸಿರೆಂದವನು
ಹೊಸ ಚರಿತೆಯ ಬರೆದನು ಕೆಂಪೇಗೌಡ.
ರಣ ಕಲಿ ಇವನು ರಣ ಹುಲಿ ಇವನು
ರಣ ಪಡೆಗಳಿಗೆ ಅಧಿಪತಿ ಇವನು
ಯುಗ ಧರ್ಮೊಧ್ಧಾರಕ ಕೆಂಪೇಗೌಡ.

(( ಶ್ರೀಮನ್ ಮಹಾರಾಜ ರಾಜಾದಿ ರಾಜ ಕರ್ನಾಟಕಾಂದ್ರ ಕುಲತಿಲಕ
ಶ್ರೀ ಶ್ರೀ ಶ್ರೀ ಶ್ರೀಕೃಷ್ಣ ದೇವರಾಯ ಮಹಾರಾಜ್… ಬಹುಪರಾಕ್ ))

(( ಶ್ರೀಕೃಷ್ಣ ದೇವರಾಯರ ಆಪ್ತ ಬಂಧುವಾದ
ಅಭಿಮಾನ ಅಂತರಾಳದ ಸ್ನೇಹ ಪ್ರೀತಿ ಪಡೆದ
ಹಂಪಾಪುರ ನೋಡಲೆಂದು ತಾ ಬೀದಿಯಲ್ಲಿ ನಡೆದ
ಶ್ರೀಲಕ್ಷ್ಮಿ ನಾಟ್ಯವಾಡುವ ಪರಿಯ ಸೊಬಗ ಕಂಡ ))

ಕಲೆಗಾರ ವರ್ತಕರು
ರಸಿಕರಿಗೂ ಕೃಷಿಕರಿಗೂ ಬೇರೆ ಬೇರೆ ಬೀದಿ,
ಮುತ್ತುಗಳು ರತ್ನಗಳು
ಸೇರಿನಲಿ ಅಳೆದುಕೊಡೊ ಸಂತೆ ಪೇಟೆ ಬೀದಿ,
ಭುವಿಗೆ ಇಳಿದ ಅಮರಲೋಕ ವಿಜಯನಗರ
ಕಂಡಒಡನೆ ಹೊಳೆಯಿತೊಂದು ಮಿಂಚು ಪ್ರಖರ,
ನನ್ನ ಗಡಿಯೊಳಗೆ ನನ್ನ ಯುಗದೊಳಗೆ ಇಂಥ ಪ್ರತಿರೂಪ
ಇರಲಿರಲೆಮಗೆ ಎಂಬ ಹಿರಿ ಕನಸ ಕಂಡ ಕೆಂಪೇಗೌಡ
ಕಂಕಣ ತೊಟ್ಟನು ಕೆಂಪೇಗೌಡ.
ಕನಸಲ್ಲಿ ಬಂದಳು ತಾಯಿ,
ದೇವಿ ಅಣ್ಣಮ್ಮ ತಾಯೆ ಜಗನ್ಮಾಯಿ,
ಗುರಿ ಸೇರು ಉತ್ತರ ದಾಯಿ,
ಎಂದು ಬೆನ್ನಿಂದೆ ನಿಂತ ಮಹಾಮಾಯೆ.

((ಭೂ ತಾಯಿಗೊಮ್ಮೆ ಅಡ್ದುಬಿದ್ದ ಗೌಡರು
ಕಾಲವ ನೋಡಿ ಅಡಿಗಲ್ಲು ನೆಟ್ಟರು ಬೆಂದಕಾಳೂರು
ಪೇಟೆಯನಿಟ್ಟ ಹೆಜ್ಜೆ ಹೆಜ್ಜೆಗೊಂದನು
ಗೋಪುರವಿಟ್ಟ ದಿಕ್ಕು ದಿಕ್ಕಿಗೊಂದನು ಬೆಂದಕಾಳೂರು))

ಮಂದಿರಗಳನು ಕಟ್ಟಿದ ಧರ್ಮಾತ್ಮ
ಕೆರೆ ಕಾಲುವೆಗಳ ತೋಡಿದ ಪುಣ್ಯಾತ್ಮ
ಪರ ಭಾಷಿಕರ ಕರೆದ ಪ್ರೆಮಾತ್ಮ
ಕುಲಕಸುಬುಗಳ ಪೊರೆದ ಪರಮಾತ್ಮ

ಊರ ಕಟ್ಟಿ ಸೂರು ಕೊಟ್ಟ
ಆಲ ಬೇಲ ತಾನೇ ನೆಟ್ಟ
ನಾಡಪ್ರಭು ಎಂಬ ಪಟ್ಟ
ಕೆಂಪೇಗೌಡ ಹೊತ್ತು ಬಿಟ್ಟ.
ವಿಷ್ಣು ಶೈವ ಪಂಥವೆಲ್ಲ ಒಂದೇ ಎಂದ
ದಾನ-ಧರ್ಮ ಒಂದೇ ನನ್ನ ಜೀವವೆಂದ,
ಹನಿ ಹನಿ ಬೆವರ ಹರಿ ಹರಿಸಿದನು ಹೊಸ ಹೊಸನಗರ ಮೇರೆ ಮೆರೆಸಿದನು
ಹೊಸ ಚರಿತೆಯ ಬರೆದನು ಕೆಂಪೇಗೌಡ.
ಹನಿ ಹನಿ ಬೆವರ ಹರಿ ಹರಿಸಿದನು ಹೊಸ ಹೊಸನಗರ ಮೇರೆ ಮೆರೆಸಿದನು
ಹೊಸ ಚರಿತೆಯ ಬರೆದನು ಕೆಂಪೇಗೌಡ.



ಈ ಕನ್ನಡ ಮಣ್ಣನು ಮರಿಬೇಡ-SOLILLADA SARADAARA

Advertisement

Leave a Reply

Close Menu