Brundhavanake Haalanu Maarlau | Bhavaratna |Kannada Bhavageethegalu |Folk Songs |Ratnamala Prakash – Rathnamala Prakash Lyrics
Singer | Rathnamala Prakash |
Music | Mysore Ananthaswamy |
Song Writer | Kuvempu |
ಬೃಂದಾವನಕೆ ಹಾಲನು ಮಾರಲು,
ಹೋಗುವ ಬಾರೆ ಬೇಗ ಸಖಿ
ಬೃಂದಾವನದಿ ಹಾಲನು ಕೊಳ್ಳುವ
ರಾರಿಹರೆ ಹೇಳ್ ಇಂದು ಮುಖಿ
ರಾರಿಹರೆ ಹೇಳ್ ಇಂದು ಮುಖಿ
ಗೋವನು ಕಾಯುವ ಗೋವಿಂದ ನಿಹನೆ,
ಹಾಲನು ಕೊಳ್ಳುವ ಕೇಳೆ ಸಖಿ
ಹಾಲನು ಕೊಳ್ಳುವ ಕೇಳೆ ಸಖಿ
ಚಿನ್ನವ ಕೊಡನೆ, ರನ್ನವ ಕೊಡನೆ,
ಚಿನ್ನವ ಕೊಡನೆ, ರನ್ನವ ಕೊಡನೆ
ತನ್ನನೆ ಕೊಡುವನು ಬಾರೆ ಸಖಿ
ತನ್ನನೆ ಕೊಡುವನು ಬಾರೆ ಸಖಿ
ಯಮುನಾ ತೀರದಲ್ ಅಲೆಯುವ ಬಾರೆ,
ಯಮುನಾ ತೀರದಲ್ ಅಲೆಯುವ ಬಾರೆ
ಹಾಲು ಬೇಕೆ ಹಾಲ್ ಎಂದು ಸಖಿ
ಹಾಲು ಬೇಕೆ ಹಾಲ್ ಎಂದು ಸಖಿ
ಹಾಲನು ಮಾರುವ ನೆಪದಿಂದ ಹರಿಯಾ
ಹಾಲನು ಮಾರುವ ನೆಪದಿಂದ ಹರಿಯಾ
ಮೋಹಿಸಿ ಕರೆಯುವ ಬಾರೆ ಸಖಿ
ಮೋಹಿಸಿ ಕರೆಯುವ ಬಾರೆ ಸಖಿ
ಹಾಲ ನಿವೇದಿಸಿ ಆತ್ಮವ ಅರ್ಪಿಸಿ,
ಮುಕ್ತಿಯ ಹೊಂದುವ ಸೌಮ್ಯ ಮುಖಿ
ಹಾಲ ನಿವೇದಿಸಿ ಆತ್ಮವ ಅರ್ಪಿಸಿ,
ಮುಕ್ತಿಯ ಹೊಂದುವ ಸೌಮ್ಯ ಮುಖಿ
ಹಾಲನು ಮಾರಿ ಹರಿಯನು ಕೊಳ್ಳುವ
ನಾವೇ ಧನ್ಯರು ಕಮಲ ಮುಖಿ
ಹಾಲನು ಮಾರಿ ಹರಿಯನು ಕೊಳ್ಳುವ
ನಾವೇ ಧನ್ಯರು ಕಮಲ ಮುಖಿ
ನಮ್ಮೇ ಲಾಭವ ಮೀರುವ ಲಾಭವು
ಬೇರೇನಿಹುದೆ ಇಂದು ಮುಖಿ
ಬೃಂದಾವನಕೆ ಹಾಲನು ಮಾರಲು,
ಬೃಂದಾವನಕೆ ಹಾಲನು ಮಾರಲು,
ಹೋಗುವ ಬಾರೆ ಬೇಗ ಸಖಿ, ಹೋಗುವ ಬಾರೆ ಬೇಗ ಸಖಿ
ಬೃಂದಾವನಕೆ ಹಾಲನು ಮಾರಲು,
ಹೋಗುವ ಬಾರೆ ಬೇಗ ಸಖಿ
ಬೃಂದಾವನದಿ ಹಾಲನು ಕೊಳ್ಳುವ
ರಾರಿಹರೆ ಹೇಳ್ ಇಂದು ಮುಖಿ