Aasegale Hakkigalagi Kanasugala Aagasakeri| Simha Jodi| Vishnuvardhan| Manjula| Kannada Song Lyrics – S P Balasubramaniam & S Janaki Lyrics
Singer | S P Balasubramaniam & S Janaki |
Music | Sathyam |
Song Writer | R N Jayagopal |
Asegale hakkigalaagi Song Lyrics
ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ ಬೆಳ್ಳಿಮೋಡದಾಚೆಯಲಿ, ಸಂಜೆಗೆಂಪಿನ ರಂಗಿನಲಿ,
ನೂತನ ಪ್ರೇಮ ಲೋಕದಲಿ, ಒಲವಿನ ಗೀತೆ ಹಾಡಿರಲಿ,
ಆಸೆಗಳೇ ಹಕ್ಕಿಗಳಾಗಿ. ಕನಸುಗಳ ಆಗಸಕೇರಿ…
ಬೆಳ್ಳಿ ಮೋಡದಾಚೆಯಲಿ, ಸಂಜೆ ಗೆಂಪಿನ ರಂಗಿನಲಿ,
ನೂತನ ಪ್ರೇಮ ಲೋಕದಲಿ, ಒಲವಿನ ಗೀತೆ ಹಾಡಿರಲಿ..
ಮಾಮರದ ಹೊಂದಳಿರೆ ಶುಭತೋರಣ
ಕೋಗಿಲೆಯ ಇನಿಸ್ವರವೆ ಆಮಂತ್ರಣ
ಹೊಂಬಾಳೆ ತೋಟದಲಿ ಮಧು ಮಂಟಪ
ಪ್ರೇಮಿಗಳ ಮಧುಮಿಲನ ರಸಮಂಟಪ
ಮನಸೊಂದಾದರೆ,ಕನಸೊಂದಾದರೆ,ಸುಂದರ ಆ ಬದುಕು
ಮನಸೊಂದಾದರೆ, ಕನಸೊಂದಾದರೆ, ಸುಂದರ ಆ ಬದುಕು ರವಿ ನೀನಾದರೆ, ಭೂಮಿ ನಾನಾದರೆ, ಬಾಳಿಗೆ ನೀ ಬೆಳಕು
ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ
ಬೆಳ್ಳಿಮೋಡದಾಚೆಯಲಿ,ಸಂಜೆಗೆಂಪಿನ ರಂಗಿನಲಿ,
ನೂತನ ಪ್ರೇಮ ಲೋಕದಲಿ ಒಲವಿನ ಗೀತೆ ಹಾಡಿರಲಿ.
ಭೂದೇವಿ ಹಸಿರುಟ್ಟು ನಗೆ ಸೂಸಲು ವಾಸಂತಿ ನಮಗೆಂದು ಹೂ ಚೆಲ್ಲಲು ವನರಾಣಿ ಕೈ ಬೀಸಿಕರೆ ನೀಡಲು
ತಂಗಾಳಿ ಹಿತವಾಗಿ ತಾ ಬೀಸಲು ಜಗವ ಮರೆತು, ನಮ್ಮಲಿ ಬೆರೆತು,
ಮೆರೆವ ಹಾಯಾಗಿ ಜಗವ ಮರೆತು, ನಮ್ಮಲಿ ಬೆರೆತು,
ಮೆರೆವ ಹಾಯಾಗಿ
ಯುಗಯುಗವೆಲ್ಲ ಹೀಗೆ
ಕಳೆವ ಬಾಳಲಿ ಒಂದಾಗಿ…..
ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ ಬೆಳ್ಳಿ ಮೋಡದಾಚೆಯಲಿ ಸಂಜೆ ಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ ಒಲವಿನ ಗೀತೆ ಹಾಡಿರಲಿ
ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ