Advertisement
Amar | Marethuhoyithe Song Lyrics | Sanjith Hegde | Abishek Ambareesh | Tanyahope | Arjun Janya – SANJITH HEGDE Lyrics
Advertisement
Singer | SANJITH HEGDE |
Music | ARJUN JANYA |
Song Writer | KAVIRAJ |
Maretu hoyite nannaya hajari Song Lyrics
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಕರಗಿದೆ ನಾಲಿಗೆ ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಒಂದು ನಿಶ್ಶಬ್ದ ರಾತ್ರೀಲಿ ನಾವು
ಆಡಿದಾ ಮಾತು ಹಸಿಯಾಗಿದೆ
ನಾವು ನಡೆದಂತ ಹಾದೀಲಿ ಇನ್ನೂ
ಹೆಜ್ಜೆಗುರುತೆಲ್ಲ ಹಾಗೆ ಇದೆ
ಒಂಚೂರು ಹಿಂತಿರುಗಿ ನೀ ನೋಡೆಯ
ಇನ್ನೊಮ್ಮೆ ಕೈಚಾಚೆಯ
ಕರಗಿದೆ ನಾಲಿಗೆ ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಜೋರು ಮಳೆಯೆಲ್ಲ ನಂಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ
ಕೋಟಿ ಕನಸೆಲ್ಲ ಕೈಜಾರಿ ಹೋಗಿ
ಕಾಲಿ ಕೈಯಲ್ಲಿ ಕುಳಿತಂತಿದೆ
ಎಷ್ಟೊಂದು ಏಕಾಂಗಿ ನೋಡೀದಿನ
ದೂರಾಗಿ ನಿನ್ನಿಂದ ನಾ
ಕರಗಿದೆ ನಾಲಿಗೆ ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ…
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ….
ಹೃದಯಕೆ ಹೆದರಿಕೆ -SANJITH HEGDE
Advertisement